ವಶಿಷ್ಠಿ ನದಿಯು ಭಾರತದ ಮಹಾರಾಷ್ಟ್ರದ ಕೊಂಕಣ ತೀರದಲ್ಲಿರುವ ದೊಡ್ಡ ನದಿಗಳಲ್ಲಿ ಒಂದಾಗಿದೆ. ನದಿಯು ಪಶ್ಚಿಮ ಘಟ್ಟಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಪಶ್ಚಿಮಕ್ಕೆ ಅರಬ್ಬಿ ಸಮುದ್ರದ ಕಡೆಗೆ ಸಾಗುತ್ತದೆ. ಈ ನದಿಯು ಅಲೋರ್ ಬಳಿಯ ಕೊಲ್ಕೆವಾಡಿ ಅಣೆಕಟ್ಟನ್ನು ಸೇರುತ್ತದೆ. ಈ ಅಣೆಕಟ್ಟು ವಿಶಾಲವಾದ ಜಲಾಶಯವನ್ನು ಹೊಂದಿದೆ. ಈ ಜಲಾಶಯವು ವಶಿಷ್ಠಿ ನದಿಯ ಉಪನದಿಗಳನ್ನು ಪೋಷಿಸುತ್ತದೆ. == ಇತಿಹಾಸ ಮತ್ತು ವಸಾಹತುಗಳು == ಈ ನದಿಯ ದಡದಲ್ಲಿ ಚಿಪ್ಲುನ್ ಪಟ್ಟಣವಿದೆ. ೨೦೦೫ ರ ಮಹಾರಾಷ್ಟ್ರ ಪ್ರವಾಹದ ಸಮಯದಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ನಗರದ ಅನೇಕ ನಿವಾಸಿಗಳು ಇಲ್ಲಿದ ಸ್ಥಳಾಂತಗೊಂಡರು. == ವನ್ಯಜೀವಿ == ನದಿಯು ಅನೇಕ ನದಿ ದ್ವೀಪಗಳನ್ನು ಹೊಂದಿದೆ. ಇಲ್ಲಿನ ನೀರಿನಲ್ಲಿ ಮೊಸಳೆಗಳು ವಾಸಿಸುತ್ತವೆ ಎಂದು ತಿಳಿದುಬಂದಿದೆ. ಇಲ್ಲಿ ತುಂಬಾ ಹಾವುಗಳು ಇವೆ . == ಸಹ ನೋಡಿ == ಕೊಂಕಣ ರೈಲ್ವೆ ಭಾರತದ ನದಿಗಳ ಪಟ್ಟಿ ಪಶ್ಚಿಮ ಘಟ್ಟಗಳು == ಉಲ್ಲೇಖಗಳು ==